ನಾಡುನುಡಿ

ಸ್ವಾಗತ! ಇದು ಕನ್ನಡಿಗರ ಹೊಸ ಡಿಜಿಟಲ್ ಲೋಕ

Spread the love

ನಮಸ್ಕಾರ,

ಇವತ್ತು ನಮಗೆ ಬಹಳ ಸಂತೋಷದ ದಿನ. ದೀರ್ಘಕಾಲದ ಕನಸಾಗಿದ್ದ kannadaindians.com ಇಂದು ನಿಮ್ಮ ಮುಂದೆ ತೆರೆದುಕೊಂಡಿದೆ.

ಅಂತರ್ಜಾಲದ ಈ ವಿಶಾಲ ಪ್ರಪಂಚದಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ, ಬೆಳೆಸುವ ನಿಟ್ಟಿನಲ್ಲಿ ನಾವಿಟ್ಟಿರುವ ಚಿಕ್ಕ ಹೆಜ್ಜೆ ಇದು. ಇಲ್ಲಿ ಕೇವಲ ಸುದ್ದಿಗಳಿಲ್ಲ, ಬದಲಾಗಿ ಸುದ್ಧಿಯ ಆಚೆಗಿನ ‘ವಿಚಾರ’ಗಳಿವೆ. ಕುವೆಂಪು ಅವರ ವೈಚಾರಿಕತೆಯಿಂದ ಹಿಡಿದು, ಇಂದಿನ ತಂತ್ರಜ್ಞಾನದವರೆಗೂ ಎಲ್ಲವನ್ನೂ ನಮ್ಮ ಭಾಷೆಯಲ್ಲೇ ಚರ್ಚಿಸುವ ಆಸೆ ನಮ್ಮದು.

ಈ ವೆಬ್‌ಸೈಟ್‌ನಲ್ಲಿ ಮುಂದಿನ ದಿನಗಳಲ್ಲಿ ನೀವು ಏನನ್ನು ನಿರೀಕ್ಷಿಸಬಹುದು?

  • ನಾಡಿನ ಕಥೆಗಳು: ಮರೆಯಾದ ಮತ್ತು ಮರೆಯಲಾಗದ ಇತಿಹಾಸ.
  • ವಿಚಾರ ಮಂಥನ: ಪ್ರಚಲಿತ ಘಟನೆಗಳ ಬಗ್ಗೆ ಮುಕ್ತ ಚರ್ಚೆ.
  • ಸಾಹಿತ್ಯ ಸಂಭ್ರಮ: ಪುಸ್ತಕ ಪರಿಚಯ ಮತ್ತು ಕವಿಗಳ ಮಾತು.

ಬನ್ನಿ, ಕೈಜೋಡಿಸಿ. ಕನ್ನಡದ ಕಂಪನ್ನು ಜಗತ್ತಿನಾದ್ಯಂತ ಪಸರಿಸೋಣ. ನಿಮ್ಮ ಸಲಹೆ, ಸಹಕಾರಗಳಿಗೆ ಸದಾ ಸ್ವಾಗತ.

ಇಂತಿ, ನಿಮ್ಮ ಹೆಮ್ಮೆಯ ಕನ್ನಡಿಗ.

Leave a Reply

Your email address will not be published. Required fields are marked *